HomeHindu dharmika nambikegala vyjnaninka hinnale (ಹಿಂದೂ ಧಾರ್ಮಿಕ ನಂಬಿಕೆಗಳ ವೈಜ್ಞಾನಿಕ ಹಿನ್ನೆಲೆ) - ಸಂತೋಷ್‌‌ಕುಮಾರ್‌ ಬಿ.ಎಸ್‌‌
Hindu dharmika nambikegala vyjnaninka hinnale (ಹಿಂದೂ ಧಾರ್ಮಿಕ ನಂಬಿಕೆಗಳ ವೈಜ್ಞಾನಿಕ ಹಿನ್ನೆಲೆ) - ಸಂತೋಷ್‌‌ಕುಮಾರ್‌ ಬಿ.ಎಸ್‌‌
Hindu dharmika nambikegala vyjnaninka hinnale (ಹಿಂದೂ ಧಾರ್ಮಿಕ ನಂಬಿಕೆಗಳ ವೈಜ್ಞಾನಿಕ ಹಿನ್ನೆಲೆ) - ಸಂತೋಷ್‌‌ಕುಮಾರ್‌ ಬಿ.ಎಸ್‌‌
Standard shipping in 7 working days

Hindu dharmika nambikegala vyjnaninka hinnale (ಹಿಂದೂ ಧಾರ್ಮಿಕ ನಂಬಿಕೆಗಳ ವೈಜ್ಞಾನಿಕ ಹಿನ್ನೆಲೆ) - ಸಂತೋಷ್‌‌ಕುಮಾರ್‌ ಬಿ.ಎಸ್‌‌

₹120
₹101
Saving ₹19
16% off
Product Description

ಪುಸ್ತಕದ ಮುಖಬೆಲೆ - 120 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 101 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.


ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಿಂದೂ ಧರ್ಮದ ಹತ್ತು ಹಲವು ಆಚರಣೆ, ಸಂಪ್ರದಾಯಗಳ ಮಹತ್ವವನ್ನು ಸರಳವಾಗಿ ಹಾಗೂ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿಕೊಡುವ ಒಂದು ಅಪರೂಪದ ಪುಸ್ತಕ ಸಂತೋಷ್‌ ಕುಮಾರ್‌ ಬಿ.ಎಸ್‌ ಅವರು ಬರೆದಿರುವ 'ಹಿಂದೂ ಧಾರ್ಮಿಕ ನಂಬಿಕೆಗಳ ವೈಜ್ಞಾನಿಕ ಹಿನ್ನೆಲೆ’. ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಸಣ್ಣ ಸಣ್ಣ ಅಂಶಗಳಲ್ಲೂ ಹಿಂದೂ ಧರ್ಮ ಹೇಗೆ ವೈಜ್ಞಾನಿಕತೆಯನ್ನು ಅಳವಡಿಸಿಕೊಂಡಿತ್ತು, ಈ ಮೂಲಕ ಹಿಂದೂ ಧರ್ಮದ ನಂಬಿಕೆಗಳಿಗೆ ಸರಳವಾದ, ಆದರೆ ಪರಿಣಾಮಕಾರಿಯಾದ ವೈಜ್ಞಾನಿಕ ಹಿನ್ನೆಲೆಯಿದೆ ಎನ್ನುವುದನ್ನು ಈ ಪುಸ್ತಕದ 50 ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಉದಾಹರಣೆಗೆ ಹಿಂದೂಗಳಲ್ಲಿರುವ ’ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುವುದು’, ’ಹಿಂದೂ ದೇವಾಲಯಗಳಲ್ಲಿ ಘಂಟೆಗಳ ಬಳಕೆ’, ’ನೆಲಕ್ಕೆ ಸೆಗಣಿ ಸಾರಿಸುವುದೇಕೆ’, ’ಹೋಮವನ್ನೇಕೆ ಮಾಡುವುದು’, ಕಾಲುಂಗುರ ಧರಿಸುವುದು’, ’ಸೀಮಂತವನ್ನೇಕೆ ಮಾಡಬೇಕು’... ಹೀಗೆ ಹಿಂದೂ ಧರ್ಮೀಯರ ನಿತ್ಯ ಬದುಕಿನಲ್ಲಿ ಬೆರೆತು ಹೋಗಿರುವ ವಿವಿಧ 50 ಸಂಗತಿಗಳ ಹಿಂದೆ ನಮ್ಮ ಧರ್ಮದ ಹಿರಿಯರು ಅಳವಡಿಸಿರುವ ವೈಜ್ಞಾನಿಕ ಹಿನ್ನೆಲೆಗಳು, ವೈದ್ಯಕೀಯ ಕಾರಣಗಳು ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ, ಅಂದರೆ ಕೆಲವೇ ಕೆಲವು ಸಾಲುಗಳಲ್ಲಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಹಾಗೆಂದು ಅತಿಯಾದ ವಿವರಣೆಗಳಿಂದಲೂ ಭಾರವಾಗದ ಇಲ್ಲಿನ ವಿಷಯಗಳು, ಹಿಂದೂ ಧರ್ಮದ ಮಹತ್ವಕ್ಕೆ ಹಿಡಿದ ಒಂದು ಪುಟ್ಟ ದೀವಿಗೆಯಂತೆ ಇದೆ. ಹಿಂದೂ ಧರ್ಮದ ಬಗ್ಗೆ ಒಲವಿರುವ, ಆಸಕ್ತಿ ಇರುವ, ಕುತೂಹಲ ಇರುವ ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಲೇಬೇಕಾಗಿದೆ.


ಶಿವಮೊಗ್ಗ ಜಿಲ್ಲೆ ಕೋಡೂರು ಯಳಗಲ್ಲಿನ ಬೆನಕ ಬುಕ್ಸ್‌ ಬ್ಯಾಂಕ್‌ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now