ಪುಸ್ತಕದ ಮುಖಬೆಲೆ - 90 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 81 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ಮಲೆಯಾಳಂ, ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮ ಸಹಜ ನಟನೆಯಿಂದ ಹೆಸರು ಗಳಿಸಿರುವ ನಟಿ ನವ್ಯಾ ನಾಯರ್. ತಮ್ಮ ನಟನೆಗೆ ಕೇರಳ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ನವ್ಯಾ ನಾಯರ್ ಅವರ ಆತ್ಮಕಥೆ ’ಧನ್ಯವೀಣಾ’. ಜಾನೆಟ್ ಐ.ಜೆ ಅವರು ಈ ಆತ್ಮಕಥೆಯನ್ನು ಅನುವಾದಿಸಿದ್ದರೆ, ಪತ್ರಕರ್ತರಾದ ಜಿ.ಎಸ್.ಯುಧಿಷ್ಠಿರ ಅವರು ನಿರೂಪಣೆ ಮತ್ತು ಸಂಯೋಜನೆ ಮಾಡಿದ್ದಾರೆ.
ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ.